ಪ್ರೀತಿಯ ಕವನಗಳು | Love Quotes In Kannada

Here we shared the latest collection of love quotes in kannada / ಪ್ರೀತಿಯ ಕವನಗಳು. All quotes are obtained from various resources. So credits go to all respective authors.

Love is a powerful emotion that can bring people together and improve the world. From the sweet whispers of a new romance to the steadfast love of a long-term relationship, the way we experience and express love is unique to each individual.

In this blog, we will explore the many aspects of kannada love quotes, a collection of timeless quotes that capture its essence and inspire us to love and care for our relationships. So whether you’re looking for inspiration, comfort, or simply a reminder of the beauty of love, read on.

Love Quotes in Kannada | ಪ್ರೀತಿಯ ಕವನಗಳು

“ಮನಸ್ಸಿನ ನ್ಯಾಯಾಲಯದಲ್ಲಿ ಮನಸಾಕ್ಷಿಯೇ ನ್ಯಾಯಾಧೀಶ.”

“ಯಾರೋ ಅಪರಿಚಿತರು ಕೊಟ್ಟ ನೋವನ್ನು ಎರಡು ದಿನಗಳಲ್ಲಿ ಮರೆಯಬಹುದು, ಆದರೆ ನಮ್ಮ ಬಗ್ಗೆ ಎಲ್ಲ ತಿಳಿದಿರುವ ನಮ್ಮವರೇ ಕೊಟ್ಟ ನೋವನ್ನು ಜೀವನಪೂರ್ತಿ ಮರೆಯಲು ಸಾಧ್ಯವಿಲ್ಲ..”

“ಯಾರಿಗೆ ಎಷ್ಟೇ ಪ್ರೀತಿ ತೋರಿಸಿದರು, ಅವರ ಬದುಕಿನಲ್ಲಿ ನಾವು ಹೊರಗಿನವರೇ…”

“ಒಲ್ಲದ ಮನಸ್ಸಿನಿಂದ ಕಳೆಯುವ, ಪ್ರತಿಯೊಂದು ನಿಮಿಷ ವರುಷಕ್ಕೆ ಸಮ …”

“ನನ್ನ ಕಣ್ಣಲ್ಲಿ ಇರೋ ನೋವೆ ನಿನಗೆ ಅರ್ಥ ಆಗ್ತಿಲ್ಲ, ಇನ್ನು ಮನಸ್ಸಲ್ಲಿರೋ ಪ್ರೀತಿ ಹೇಗೆ ಅರ್ಥ ಆಗಬೇಕು ಹೇಳು….”

“ಕೆಲವರು ಎಷ್ಟೇ ಒಳ್ಳೆಯವರ ರೀತಿ ನಾಟಕ ಮಾಡುದ್ರು, ವಿಧಿಯಾಟದ ಮುಂದೆ ಬಯಲಾಗೆ ಆಗುತ್ತೆ ನಾಟಕ ಆಡೋರ ಜಾತಕ …”

“ಹೆಣ್ಣಿಗೆ ಪ್ರೀತ್ಸೋದು ಗೊತ್ತು, ಆ ಪ್ರೀತಿಗೆ ಬೆಲೆ ಸಿಕ್ಕದೇ ಹೋದಾಗ… ಅದನ್ನು ಬಿಟ್ಟು ಸ್ವಾಭಿಮಾನದಿಂದ ಬದುಕೋದು ಗೊತ್ತು..”

“ಎದೆಯಲ್ಲಿ ಸಿಹಿಯಾದ ನೆನಪೊಂದು ಅಸುನೀಗಿದೆ, ಮೊಗದಲ್ಲಿ ಸಿಹಿಯಾದ ನಗುವೊಂದು ಮರೆಯಾಗಿದೆ …”

“ತೀರಾ ಅಸಹ್ಯ ಅನಿಸುವಷ್ಟು ಯಾರನ್ನು ದ್ವೇಷಿಸಬಾರದು, ಹಾಗೇನೇ ತೀರಾ ಅಂಗಲಾಚಿ ಬೇಡಿಕೊಳ್ಳುವಷ್ಟು ಯಾರನ್ನು ಪ್ರೀತಿಸಲೂಬಾರದು ….”

“ನೀ ಬರೆದ ಕವಿತೆಯಲ್ಲಿ ಮರೆತು ಹೋದ ಪದವೊಂದು ನಾನು, ನಾ ಬರೆಯಲಾಗದೇ ಹೋದ ಕವಿತೆಯಲ್ಲಿ ಮರೆಯಲಾಗದ ಸಾಲುಗಳು ನೀನು..”

“ಮೋಸ ಮಾಡಿದವರನ್ನು ಕ್ಷಮಿಸುವಷ್ಟು ಉದಾರಿಯಾಗಬೇಕು ನಿಜ, ಆದರೆ ಅವರನ್ನು ಮತ್ತೆ ಮತ್ತೆ ನಂಬುವಷ್ಟು ಮೂರ್ಖರಾಗಬಾರದು …”

“ಕಾಡುವ ಬಡತನ ನಾಳೆ ಹೋಗಬಹುದು, ಇಲ್ಲದ ಸಿರಿತನ ಮುಂದೆ ಬರಬಹುದು, ಆದರೆ ಒಮ್ಮೆ ಕಳೆದುಕೊಂಡ ನಂಬಿಕೆ, ವಿಶ್ವಾಸ, ಪ್ರೀತಿ ಮತ್ತೆ ಬರುವುದಿಲ್ಲ …”

“ಭಾವನೆಗಳಿಗೆ ನಿರಂತರವಾಗಿ ಏಟು ಬೀಳ್ತಾ ಹೋದ್ರೆ, ಹೃದಯ ಕೂಡ ಕಲ್ಲಾಗಿ ಬೀಳುತ್ತೆ …”

“ಒಳ್ಳೆಯ ಮಾತುಗಳು ಯಾರಿಗೂ ಇಷ್ಟ ಆಗಲ್ಲ, ಆದರೆ ಒಳ್ಳೆಯ ಮನಸ್ಸುಗಳು ಯಾರಿಗೂ ಅರ್ಥ ಆಗಲ್ಲ..”

“ಕೆಲವರು ನಮ್ಮನ್ನು ತುಂಬಾ ಇಷ್ಟಪಡುತ್ತಾರೆ, ಅನ್ನೋ ಭ್ರಮೆಯಲ್ಲಿ ನಾವಿರ್ತಿವಿ, ಆಮೇಲೆ ಗೊತ್ತಾಗುವುದು, ಅವರ ಟೈಂಪಾಸಿಗೆ ನಮ್ಮನ್ನು use ಮಾಡ್ಕೊಂಡಿದ್ದಾರೆ ಅಂತ…”

“ಬಿಟ್ಟು ಸಾಯುವುದು ತುಂಬಾ ಸುಲಭ, ಆದರೆ ಬಿಟ್ಟುಕೊಟ್ಟು ಬದುಕೋದ ಇದೆಯಲ್ಲ ಅದು ನರಕಕ್ಕಿಂತ ನರಕ”

“ಕಳೆದು ಹೋದವರನ್ನು ಹುಡುಕಬಹುದು, ಆದರೆ ಬದಲಾದವರನ್ನು ಹುಡುಕುವುದು ತುಂಬಾ ಕಷ್ಟ…”

“ಪ್ರೀತಿಯು ಬಂಡಾಯದ ಹಕ್ಕಿಯಾಗಿದ್ದು, ಅದನ್ನು ಯಾರೂ ಪಳಗಿಸಲು ಸಾಧ್ಯವಿಲ್ಲ…”

“ಬಣ್ಣಗಳನ್ನು ನೋಡಿದರೆ ಭಯವಾಗಲ್ಲ ಆದರೆ ಬಣ್ಣ ಬದಲಿಸುವ ವ್ಯಕ್ತಿಗಳನ್ನು ಕಂಡರೆ ಭಯವಾಗುತ್ತೆ ..;”

“ನಂಬಿಕಸ್ತರಿಂದ ಮೋಸ ಹೋದೆವು ಎಂದು ಪ್ರಾಮಾಣಿಕರು ಹತಾಶರಾಗಬೇಕಿಲ್ಲ, ಕಡೆಗೆ ಇತಿಹಾಸದಲ್ಲಿ ಉಳಿದವರು ಪ್ರಾಮಾಣಿಕರು ಹೊರತು ಮೋಸಗಾರರಲ್ಲ …”

“ಎದೆಯೊಳಗೆ ನನ್ನವಳ ಹೆಸರು ಹಚ್ಚಾಗಿದೆ, ಅಳಿಸಲು ಸಾವು ಬರಬೇಕು ಇಲ್ಲವೇ ಸಾವನ್ನೇ ನಾ ಹುಡುಕಿ ಹೊರಡಬೇಕು …”

“ಮೋಸ ಎಲ್ಲರೂ ಮಾಡುತ್ತಾರೆ ಆದರೆ ನಂಬಿಕೆ ದ್ರೋಹ ನಾವು ತುಂಬಾ ನಂಬಿದವರೆ ಮಾಡುತ್ತಾರೆ..”

“ನಮ್ಮ ಪ್ರೀತಿ ರಾಧಾಕೃಷ್ಣರ ತರ ಪವಿತ್ರವಾಗಿರಬೇಕು ಅಂತ ಬಯಸಿದ್ದೆ, ತಪ್ಪಾಗಿ ಹೋಯಿತು, ನೀ ನನ್ನ ಬಾಳಿನಲ್ಲಿ  ರಾಧೆ ಆದೇ ಹೊರತು ರುಕ್ಮಿಣಿ ಆಗಲೇ ಇಲ್ಲ… ;”

“ಸಂಬಂಧಗಳು ಗಾಜಿನಂತೆ… ಕೆಲವೊಮ್ಮೆ ಅದನ್ನು ಮತ್ತೆ ಒಟ್ಟಿಗೆ ಸೇರಿಸುವುದನ್ನು ನೋಯಿಸಲು ಪ್ರಯತ್ನಿಸುವುದಕ್ಕಿಂತ ಹೆಚ್ಚಾಗಿ ಅವುಗಳನ್ನು ಮುರಿಯುವುದು ಉತ್ತಮ…”

“ಆದಾಗ ಹೃದಯಕ್ಕೆ ಗಾಯ, ಮೊಗದಲ್ಲಿರುವ ನಗುವೇ ಮಾಯ….”

“ಸೋತ ಕಣ್ಣುಗಳ ಕಣ್ಣೀರು ಹೇಳುತ್ತಿದೆ, ಕಂಡ ಕನಸುಗಳು ನೂರು…”

“ಬಿಸಿರಕ್ತಗಳ ಹೃದಯ ಬೆಸೆಯಬೇಕಾದ ಹೊತ್ತಲ್ಲಿ, ಆಸೆಯೊಂದು ಹೃದಯವನ್ನೆ ಛಿಧ್ರಗೊಳಿಸಿತು. ..”

“ಎಷ್ಟೇ ಕಷ್ಟ ಬಂದರೂ ಕಣ್ಣೀರು ಹೊರಬರದಂತೆ ನೋಡಿಕೊಳ್ಳಬೇಕು, ಯಾಕೆಂದರೆ ನಮ್ಮ ಕಣ್ಣೀರು ನೋಡಿ ಸಮಾಧಾನ ಮಾಡುವವರಿಗಿಂತ ಅಪಹಾಸ್ಯ ಮಾಡುವವರೇ ಹೆಚ್ಚು..”

“ನಿರೀಕ್ಷೆ ಹುಸಿಯಾಯಿತು, ಕನಸು ನುಚ್ಚುನೂರಾಯಿತು. .”

“ನಿನ್ನ ನೆನಪು ನನಗೆ ಮನೆಯಂತೆ ಭಾಸವಾಗುತ್ತಿದೆ, ಆದ್ದರಿಂದ ನನ್ನ ಮನಸ್ಸು ಅಲೆದಾಡಿದಾಗಲೆಲ್ಲ ನಿನ್ನ ಬಳಿಗೆ ಮರಳುತ್ತದೆ ….”

“ಚುಚ್ಚು ಮಾತುಗಳನ್ನು ತಡೆದುಕೊಳ್ಳಬಹುದು, ಆದರೆ ಮನಸ್ಸಿಗೆ ಆದ ನೋವನ್ನು ತಡೆಯಲು ಸಾಧ್ಯವಿಲ್ಲ.”

“ಇನ್ನೇಷ್ಟು ಹೊರಲಿ ಭಾರವನು..? ಮುಟ್ಟಿಬಿಡುವೆನು ಬೇಗ ಒಂದು ತೀರವನ್ನು…”

“ಬದುಕೆಂಬ ನಾಟಕದಲ್ಲಿ ಸುಖಕ್ಕಿಂತ ನೋವಿನ ನಟನೆ ಜಾಸ್ತಿ ಇದೆ ..”

Leave a Comment